Kannada Articles

Gurudev Introduction (kannada)


ಪ್ರಪಂಚದ ಇತಿಹಾಸದಲ್ಲಿ ಅವತಾರ ಮೂರ್ತಿಯು ತನ್ನ ಬಹುಆಯಾಮಗಳೊಂದಿಗೆ ಈ ಭೂಮಿಯ ಮೇಲೆ ಅವತರಿಸುವುದು ಬಹಳ ವಿರಳ. ಹೀಗೆ ಬರುವ ಶಕ್ತಿಯು ಇಡೀ ವಿಶ್ವವನ್ನು ಬದಲಿಸುವ, ಅವರ ಚೈತನ್ಯವನ್ನು, ಚಿಂತನೆಯನ್ನು ಬದಲಿಸುವುದಕ್ಕಾಗಿ ಅವತರಿಸುತ್ತದೆ. ಪರಮ ಪೂಜ್ಯ ಗುರುದೇವ ಪಂಡಿತ ಶ್ರೀರಾಮ ಶರ್ಮ ಆಚಾರ್ಯರನ್ನು ಈ ಬಗೆಯ ಶಕ್ತಿಯನ್ನಾಗಿ ಕಾಣಬಹುದು. ಅವರು ಗುರು ಹಾಗೂ ಅವತಾರ ಮೂರ್ತಿಗಳ ಎರಡು ರೂಪಗಳಲ್ಲಿ ನಮ್ಮ ನಡುವೆ ಬಂದು, 80 ವಷ್ರಗಳ ತಮ್ಮ ಜೀವನದಲ್ಲಿ ಒಂದು ವಿರಾಟ್ ಜ್ಯೋತಿಯನ್ನು ಪ್ರಜ್ವಲಿಸಿ, ಇಂದು ಯುಗ ಪರಿವರ್ತನೆಗಾಗಿ ಪ್ರತಿಬದ್ಧರಾಗಿರುವ ಸೂಕ್ಷ್ಮ ಋಷಿ ಚೈತನ್ಯದೊಂದಿಗೆ ಒಂದಾದರು. ಪರಮ ವಂದನೀಯ ಮಾತಾಜಿಯವರು ಶಿವನ ಕಲ್ಯಾಣಕಾರಿ ಕಾಯ್ರಗಳಲ್ಲಿ ಜೊತೆನೀಡಲು ಕಾಲಕಾಲಕ್ಕೆ ಮಹಾಕಾಳಿಯಾಗಿ, ಸೀತೆಯಾಗಿ, ಶಾರದೆಯಾಗಿ, ಮಾತಾ ಭಗವತಿಯಾಗಿ ಅವತರಿಸುತ್ತಿದ್ದಾರೆ. ಅವರೂ ಕೊನೆಯಲ್ಲಿ ತಮ್ಮ ಸೂಕ್ಷದಲ್ಲಿ ವಿಲೀನವಾಗಿ ತಮ್ಮ ಆರಾಧ್ಯ ದೈವನೊಂದಿಗೆ ಏಕಾಕಾರವಾಗಿ ಆ ಜ್ಯೋತಿಪುರುಷನ ಒಂದು ಅಂಗವಾಗಿದ್ದಾರೆ. ಅವರಿಬ್ಬರೂ ಇಂದು ನವ್ಮೊಂದಿಗೆ ಸ್ಥೂಲ ಶರೀರದಲ್ಲಿ ಇರದಿದ್ದರೂ, ಅವರು ಹೇಗೆ ಹೊಸ ಸೃಷ್ಟಿಯನ್ನು ರೂಪಿಸಿದರೋ, ಹೇಗೆ ಮುಂಬರುವ ಮಾನವರ ನಮೂನೆಯನ್ನು ತಯಾರಿಸಿದರೋ, ಅದನ್ನು ನಾವಿಂದು ಅವರು ಸ್ಥಾಪಿಸಿರುವ ಶಾಂತಿಕುಂಜ, ಬ್ರಹ್ಮವಚ್ರಸ್ ಶೋಧ್ ಸಂಸ್ಥಾನ, ಗಾಯತ್ರೀ ತಪೋಭೂಮಿ, ಅಖಂಡ ಜ್ಯೋತಿ ಸಂಸ್ಥಾನ್ ಹಾಗೂ ಯುಗತೀಥ್ರ ಆವಲ್ಖೇಡಾಗಳಲ್ಲಿ, ಸಂಕಲ್ಪಿತ ಸೃಜನ ಸೇನಾನೀ ಗಣಗಳಲ್ಲಿ, ಕೋಟ್ಯಾಂತರ ವೀರಭದ್ರರಂತಹ ಪರಿಜನರ ಮೂಲಕ ನೋಡಬಹುದಾಗಿದೆ. ಪರಮಪೂಜ್ಯ ಗುರುದೇವರ ಸರಿಯಾದ ಮೂಲ್ಯಾಂಕನವನ್ನು ಭವಿಷ್ಯವೇ ನಿಧ್ರರಿಸಬಹುದಾದರೂ ಇಂದು ಅವರ ಸಾಕ್ಷಾತ್ಕಾರವನ್ನು ಪಡೆಯಲಿಚ್ಛಿಸುವವರಿಗೆ, ಅವರ ಮಾಗ್ರದಶ್ರನದಲ್ಲಿ ಮುಂದುವರೆಯಬೇಕೆಂದಿರುವವರಿಗೆ ಅವರು ವಿರಾಟ್ ಪ್ರಮಾಣದಲ್ಲಿ ರಚಿಸಿರುವ ಅವರ ತೂಕಕ್ಕಿಂತಲೂ ಹೆಚ್ಚು ಭಾರವಾದ, ಯುಗ ಸಂಜೀವಿನಿಯಾಗಿರುವ ಸಾಹಿತ್ಯವು ಸಹಾಯಕಾರಿಯಾಗಿರುತ್ತದೆ. ಈ ಸಾಹಿತ್ಯದಲ್ಲಿ ಭಾವಸಂವೇದನೆಯು ಎಷ್ಟು ಪ್ರಮಾಣದಲ್ಲಿರುತ್ತದೆಂದರೆ ಓದುವವರಿಗೆ ಲೇಖನಿಯಲ್ಲಿ ಶಾಯಿಯಿರದೆ, ಸಂವೇದನೆಯನ್ನೇ ತುಂಬಿ ಬರೆದಂತಿರುತ್ತದೆ. ಈ ಪರಿವತ್ರನೆಯ ಎದುರು ರೂಸೋನ್ ಪ್ರಜಾತಂತ್ರ, ಕಾಲ್್ರ ಮಾಕ್್ಸ್ರನ ಸಾಮ್ಯವಾದದ ಕ್ರಾಂತಿಗಳೂ ಸಣ್ಣದೆನಿಸುತ್ತವೆ. ಅವರ ಬಹು ಆಯಾಮೀ ವ್ಯಕ್ತಿತ್ವ, ಅವರ ಸಂಘಟನಾಶಕ್ತಿ, ಸಾಧನೆ, ಕೋಟ್ಯಾಂತರ ಜನರ ಸಂರಕ್ಷಣೆ, ಗಾಯತ್ರೀ ಮಹಾವಿದ್ಯೆಯ ಪುನರುದ್ಧಾರ, ಸಂಸ್ಕಾರ ಪರಂಪರೆಗೆ ಮತ್ತೆ ಪ್ರಾಣ ನೀಡುವಿಕೆ, ಸ್ತ್ರೀಯರ ಬಗ್ಗೆ ಅನನ್ಯ ಕರುಣಾ ದೃಷ್ಟಿ ಬೀರಿ ಅವರ ಉದ್ಧಾರಕ್ಕಾಗಿಯೇ ಭೂಮಿಯ ಮೇಲೆ ಬಂದಂತಿರುವ ಅವರ ಜೀವನ – ಇವೆಲ್ಲರ ಬಗ್ಗೆ ಒಂದು ವಿಶ್ವಕೋಶದಷ್ಟು ಬರೆದರೂ ಇನ್ನೂ ಯಾವ ಯಾವ ವಿಷಯಗಳ ಬಗ್ಗೆ ಹೇಳಬೇಕೆಂಬುದು ಅವರ ಈ ಜನ್ಮದ ವೃತ್ತಾಂತವನ್ನು ಪರಿಚಯಿಸುವ ಪ್ರತಿಯೊಬ್ಬ ವ್ಯಕ್ತಿಯೂ ಎದುರಿಸುವ ಸವಾಲಾಗಿದೆ.

Pandit Shri Ram Sharma Acharya

ಪಂಡಿತ್ ಶ್ರೀ ರಾಮ್ ಶರ್ಮಾ ಆಚಾರ್ಯ

ವಿಕ್ರಮ ಸಂವತ್ 1967, ಆಶ್ವಯುಜ ಕೃಷ್ಣ ತ್ರಯೋದಶಿ(20 ಸೆಪ್ಟೆಂಬರ್ 1911)ಯಂದು ಆಗ್ರಾದಿಂದ 15 ಮೈಲು ದೂರದಲ್ಲಿರುವ ಆವಲ್ಖೇಡಾದಲ್ಲಿ ಸ್ಥೂಲ ಶರೀರದಲ್ಲಿ ಜನ್ಮಿಸಿದ ಶ್ರೀರಾಮ ಶಮ್ರರ ಬಾಲ್ಯ ಹಾಗೂ ಕಿಶೋರಾವಸ್ಥೆಯು ಗ್ರಾಮೀಣ ಪರಿಸರದಲ್ಲಿಯೇ ಕಳೆಯಿತು. ಸುತ್ತಮುತ್ತಲಿನ ಪ್ರದೇಶಗಳ ರಾಜ ಮನೆತನಗಳಲ್ಲಿ ರಾಜ ಪುರೋಹಿತರಾದ, ಶ್ರೇಷ್ಠ ವಿದ್ವಾಂಸರಾದ, ಭಾಗವತ ಕಥಾಕಾರರಾದ, ಅಂತಃಕರಣದಲ್ಲಿ ಮಾನವರೆಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಶ್ರೀ ಪಂ. ರೂಪ್ ಕಿಶೋರ್ ಶಮ್ರರು. ಸಾಧನೆಯ ಬಗ್ಗೆ ಶ್ರೀರಾಮ ಶಮ್ರರ ಆಸಕ್ತಿಯು ಸಣ್ಣ ವಯಸ್ಸಿನಿಂದಲೇ ಕಾಣಿಸುತ್ತಿತ್ತು. ಅವರು ತಮ್ಮ ಓರಗೆಯವರಿಗೆ, ಸಹಪಾಠಿಗಳಿಗೆ ಮಾವಿನ ತೋಪುಗಳಲ್ಲಿ ಆತ್ಮವಿದ್ಯೆಯ ಶಿಕ್ಷಣವನ್ನು ನೀಡುತ್ತಿದ್ದರು. ಒಮ್ಮೆ ಚಡಪಡಿಕೆಯಿಂದ ಹಿಮಾಲಯಕ್ಕೆ ಹೋಗಬೇಕೆಂದು ಮನೆಯಿಂದ ಓಡಿ ಹೋದ ಶ್ರೀರಾಮರನ್ನು ಮನೆಗೆ ಕರೆತಂದ ಸಂಬಂಧಿಕರಿಗೆ, ಮುಂದೊಮ್ಮೆ ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಹೂಡುವರೆಂದು ತಿಳಿದಿರಲಿಲ್ಲವೇನೋ! ಜಾತಿಯ ಮೂಢತೆಯಲ್ಲಿ ಮುಳುಗಿದ್ದ ಅಂದಿನ ಭಾರತದಲ್ಲಿ, 10 ವಷ್ರದ ಶ್ರೀರಾಮರು ಒಬ್ಬ ವೃದ್ಧ ಕುಷ್ಠ ರೋಗ ಪೀಡಿತ ದಲಿತ ಮಹಿಳೆಯ ಶುಶ್ರೂಷೆ ಮಾಡಿದರು. ಇದಕ್ಕಾಗಿ ತಮ್ಮ ಸಂಬಂಧಿಕರ ವಿರೋಧವನ್ನು ಅವರು ಲೆಕ್ಕಿಸಲಿಲ್ಲ. ಮತ್ತೊಮ್ಮೆ ಅಸ್ಪೃಶ್ಯರೆನಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನು ನನ್ನ ಮನೆಯಲ್ಲಿ ಭಾಗವತ ಕಥೆಯನ್ನು ಹೇಳಿಸುವ ಅದೃಷ್ಟ ತನಗಿಲ್ಲವೆಂದಾಗ ಬೆಣ್ಣೆಯಂತಹ ಮನಸ್ಸಿನ ಶ್ರೀರಾಮರು ಇಡೀ ಗ್ರಾಮದ ವಿರೋಧವನ್ನು ಎದುರಿಸುತ್ತ ಆತನ ಮನೆಯಲ್ಲಿ ಭಾಗವತ ಪಾರಾಯಣ ಮಾಡಿ, ಸ್ವಚ್ಛತೆಯ ಸೂತ್ರಗಳನ್ನೂ ತಿಳಿಸಿದರು.


ಕಿಶೋರಾವಸ್ಥೆಯನ್ನು ಸೇರಿದ ಶ್ರೀರಾಮರ ಒಲವು ಸಮಾಜ ಸುಧಾರಣೆಯತ್ತ ತಿರುಗಿತು. ಔಪಚಾರಿಕ ಶಿಕ್ಷಣವನ್ನು ಸ್ವಲ್ಪವೇ ಪಡೆದ ಅವರು ಸಂತೆಗಳಲ್ಲಿ ಸ್ವಚ್ಛತೆ, ಪಶುಗಳನ್ನು ಹೇಗೆ ಸುರಕ್ಷಿತವಾಗಿಡುವುದು, ಹೇಗೆ ಸ್ವಾವಲಂಬಿಗಳಾಗುವುದು ವೊದಲಾದ ವಿಷಯಗಳ ಬಗ್ಗೆ ಹಸ್ತ ಮುದ್ರಿತ ಕರಪತ್ರಗಳನ್ನು ಹಂಚುತ್ತಿದ್ದರು. ಜನಮಾನಸವು ಆತ್ಮಾವಲಂಬಿಯಾಗಿ, ದೇಶದ ಬಗ್ಗೆ ಸ್ವಾಭಿಮಾನ ಬೆಳೆಯಲೆಂದು ಈ ಹಳ್ಳಿಯ ನವಯುವಕ ಸ್ತ್ರೀಯರಿಗೆ ಹಾಗೂ ನಿರುದ್ಯೋಗಿಗಳಿಗಾಗಿ ತಮ್ಮ ಹಳ್ಳಿಯಲ್ಲಿಯೇ ಒಂದು ನೇಯ್ಗೆ ಕೇಂದ್ರವನ್ನು ಸ್ಥಾಪಿಸಿ ಅದನ್ನು ಹೇಗೆ ನಡೆಸಿ ಅವರು ಸ್ವಾವಲಂಬಿಗಳಾಗಬಹುದೆಂದು ತೋರಿಸಿಕೊಟ್ಟರು.


ತಮ್ಮ ಹತ್ತನೆಯ ವಯಸ್ಸಿನಲ್ಲಿ ಪಂ. ಮದನ ವೋಹನ ಮಾಳವೀಯರಿಂದ ದೀಕ್ಷೆ ಪಡೆದು ಗಾಯತ್ರಿ ಸಾಧನೆಯನ್ನು ಪ್ರಾರಂಭಿಸಿದ ಶ್ರೀರಾಮರಿಗೆ ತಮ್ಮ ಮಾಗ್ರದಶಕ ಗುರುಸತ್ತೆಯ ದಶ್ರನವಾದದ್ದು ಸನ್ 1926ರ ವಸಂತ ಪಂಚಮಿಯಂದು. ಅವರು ಬೆಳಗಿಸಿದ್ದ ದೀಪದ ಪ್ರಕಾಶದಲ್ಲಿ ದಶ್ರನ ನೀಡಿದ ಅವರ ಗುರುಗಳು, ಶ್ರೀರಾಮರು ತಮ್ಮ ಹಿಂದಿನ ಜನ್ಮಗಳಲ್ಲಿ ಸಾಧಿಸಿದ್ದನ್ನು ತೋರಿಸಿ ಈ ಜನ್ಮದಲ್ಲಿನ ಗುರಿಗಳನ್ನು ನೀಡಿದರು. ನಾಲ್ಕು ಬಾರಿ ಹಿಮಾಲಯಕ್ಕೆ ಮಾಗ್ರದಶ್ರನ ಪಡೆಯಲು ಬರಲು ಹೇಳಿದ ಅವರು ಮೂರು ಸಾಧನೆಗಳನ್ನು ನೀಡಿದರು.

ಕಟ್ಟುನಿಟ್ಟಾದ ಆಹಾರ ನಿಯಮಗಳನ್ನು ಪಾಲಿಸುತ್ತ, 24 ಬಾರಿ ಮಹಾ ಪುರಶ್ಚರಣೆ(24 ಲಕ್ಷ ಗಾಯತ್ರೀ ಮಂತ್ರದ ಸಾಧನೆ)


  • ಯನ್ನು ಮಾಡುವುದು. ಬೆಳಗಿದ ಆ ದೀಪವನ್ನು ಅಖಂಡವಾಗಿ ಬೆಳಗಿಸುತ್ತ ಆ ಶಕ್ತಿಯಿಂದ, ಸಮಯ ಬಂದಾಗ ಎಲ್ಲ

  • ಜನರಿಗೆ ಆ ಪ್ರಕಾಶವನ್ನು ತಲುಪಿಸಲು ಜಾÕನಯಜÕದ ಅಭಿಯಾನವನ್ನು ನಡೆಸುವುದು. (ಇದು 1939ರಲ್ಲಿ ಅಖಂಡ ಜ್ಯೋತಿಯೆಂಬ ಪತ್ರಿಕೆಯ ರೂಪದಲ್ಲಿ ಹೊರಬಂದು, ಇಂದಿಗೂ ಕೋಟ್ಯಾಂತರ ಜನರಿಗ ಮಾಗ್ರದಶ್ರನ ನೀಡುತ್ತಿದೆ.)

  • 24 ಮಹಾಪುರಶ್ಚರಣೆಯ ಸಮಯದಲ್ಲಿ, ಯುಗಧಮ್ರವನ್ನು ನಿವ್ರಹಿಸುತ್ತ, ದೇಶಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವಿನಿಯೋಗಿಸುವುದು ಹಾಗೂ ಹಿಮಾಲಯ ಯಾತ್ರೆಯನ್ನು ಮಾಡಿ ಗುರುಗಳ ಮಾಗ್ರದಶ್ರನವನ್ನು ಪಡೆಯುವುದು.

ಜೀವನದ ಈ ಮಹತ್ವಪೂಣ್ರ ತಿರುವು ಅವರ ಜೀವನದ ಭಾವೀ ಯೋಜನೆಗಳ ರೀತಿ-ನೀತಿಯನ್ನು ನಿಧ್ರರಿಸಿತು. ಪೂಜ್ಯ ಗುರುದೇವರು ತಮ್ಮ ಆತ್ಮಕಥೆಯಾದ ‘ಹಮಾರೀ ವಸೀಯತ್ ಔರ್ ವಿರಾಸತ್’ನಲ್ಲಿ ಹೀಗೆ ಬರೆಯುತ್ತಾರೆ – “ಪ್ರಥಮ ಮಿಲನದಲ್ಲಿಯೇ ಅವರಿಗೆ ನನ್ನನ್ನು ಸಂಪೂಣ್ರವಾಗಿ ಸಮಪ್ರಿಸಿಕೊಂಡೆ. ನನ್ನ ಗುರುಗಳು ಎರಡು ವಿಷಯಗಳನ್ನು ವಿಶೇಷವಾಗಿ ತಿಳಿಸಿದರು - ಸಂಸಾರೀ ಜನರು ಹೇಳುವ ಮಾತುಗಳಿಗೆ, ಮಾಡುವ ಕೆಲಸಗಳತ್ತ ಗಮನ ಹರಿಸದೆ, ನಿಧ್ರಾರಿತ ಲಕ್ಷ್ಯದೆಡೆಗೆ ಏಕಾಂಗಿಯಾಗಿ ಸಾಹಸದಿಂದ ಮುನ್ನಡೆಯುವುದು ಹಾಗೂ ನನ್ನನ್ನು ಹೆಚ್ಚು ಹೆಚ್ಚು ಪವಿತ್ರ ಹಾಗೂ ಪ್ರಖರಗೊಳಿಸುವ ಸಾಧನೆ – ಜೋಳದ ರೊಟ್ಟಿ ಹಾಗೂ ಮಜ್ಜಿಗೆಯ ಮೇಲೆ ಜೀವಿಸುವ ಆತ್ಮಾನುಶಾಸನ. ಇದರಿಂದಲೇ ಸಾಮಥ್ಯ್ರವು ಹೆಚ್ಚಿ ಪರಮಾಥ್ರ ಪ್ರಯೋಜನಕ್ಕೆ ವಿನಿಯೋಗಿಸಲ್ಪಡುವುದು. ವಸಂತ ಪವ್ರದ ಆ ದಿನದಂದು ಗುರುಗಳು ನೀಡಿದ ಅನುಶಾಸನದ ನಿದ್ರಿಷ್ಟ ನಿರೂಪಣೆಯೇ ನನ್ನ ಹೊಸ ಜನ್ಮವಾಯಿತು. ಸದ್ಗುರುವನ್ನು ಪಡೆಯುವುದು ನನ್ನ ಜೀವನದ ಅನನ್ಯ ಹಾಗೂ ಪರಮ ಸೌಭಾಗ್ಯವಾಯಿತು”.

ಗುರುಗಳು ಹೇಳಿದ ಸಾಧನೆಯಂತೆ ಮುನ್ನಡೆದು ಶಕ್ತಿ ಸಂಪಾದಿಸುವ ಇಚ್ಛೆ ಎಷ್ಟು ಪ್ರಬಲವಾಗಿತ್ತೋ, ಪರಾವಲಂಬಿ ದೇಶದ ನೋವನ್ನು ನಿವಾರಿಸುವ ಇಚ್ಛೆ ಕೂಡ ಅಷ್ಟೇ ಪ್ರಬಲವಾಗಿತ್ತು. ಈ ಅಸಮಂಜಸ ಸ್ಥಿತಿಯನ್ನು ನಿವಾರಿಸಿದ ಅವರ ಗುರುಗಳು ಹೇಗೆ ಮನೆಗೆ ಬೆಂಕಿ ಬಿದ್ದಾಗ ಎಲ್ಲ ಕಾಯ್ರಗಳನ್ನು ಪಕ್ಕಕ್ಕಿಟ್ಟು ಬೆಂಕಿಯನ್ನು ಆರಿಸಲು ಹೋಗುತ್ತೇವೋ, ಅದೇ ರೀತಿಯಲ್ಲಿ ದೇಶದ ಪರಿಸ್ಥಿಯನ್ನು ಗಮನಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುವ ನಿದ್ರೇಶನವನ್ನು ನೀಡಿದರು. 1927 ಇಂದ 1933ರವರೆಗೆ ಅವರು ಮನೆಮಂದಿಯ ವಿರೋಧವನ್ನೆದುರಿಸುತ್ತ ಸ್ವಯಂಸೇವಕ, ಸ್ವಾತಂತ್ರ್ಯ ಸೇನಾನಿಯಂತೆ ಜೀವಿಸಿದರು. ಕಾಲ್ನಡಿಗೆಯಲ್ಲಿ ಆಗ್ರಾ ಸೇರಿದ ಅವರು ಹೋರಾಟದ ಶಿಕ್ಷಣ ಪಡೆದು ತಮ್ಮ ಸ್ನೇಹಿತರೊಂದಿಗೆ ಭೂಗತ ಚಳುವಳಿಯನ್ನು ನಡೆಸಿದರು. ಇದಕ್ಕಾಗಿ ಅನೇಕ ಬಾರಿ ಅವರು 6 ತಿಂಗಳ ಕಾರಗೃಹವಾಸವನ್ನೂ ಅನುಭವಿಸಿದರು. ಜೈಲಿನಲ್ಲಿ ಅವರು ತಮ್ಮ ನಿರಕ್ಷರಸ್ಥ ಸಂಗಡಿಗರಿಗೆ ವಿದ್ಯೆ ಕಲಿಸಿ, ತಾವೂ ಇಂಗ್ಲಿಷನ್ನು ಕಲಿತರು. ಅಸನ್ಸೋಲ್ನ ಜೈಲಿನಲ್ಲಿ ಪಂ. ಮದನವೋಹನ ಮಾಳವೀಯ, ಜವಹರ್ ಲಾಲ್ ನೆಹ್ರೂರವರ ತಾಯಿ ಸ್ವರೂಪಾರಾಣಿ ನೆಹ್ರೂ, ಅಹ್ಮದ್ ಕಿದ್ವಾಯ್, ದೇವದಾಸ್ ಗಾಂಧಿ ವೊದಲಾದವರೊಂದಿಗೆ ಇದ್ದ ಶ್ರೀರಾಮರು ಮಾಳವೀಯರಿಂದ ಒಂದು ಮೂಲಮಂತ್ರವನ್ನು ಕಲಿತರು. ಅದು ಜನರ ಸಹಕಾರವನ್ನು ಬೆಳೆಸಲು ಪ್ರತಿಯೊಬ್ಬ ವ್ಯಕ್ತಿಯ ಅಂಶದಾನದಿಂದ ಸಂಗ್ರಹಿಸಿದ ಹಣದಿಂದ ರಚನಾತ್ಮಕ ಕಾಯ್ರಕ್ರಮಗಳನ್ನು ನಡೆಸುವುದು. ಈ ಮೂಲ ಮಂತ್ರವೇ ಮುಂದಿನ ದಿನಗಳಲ್ಲಿ ಒಂದು ಘಂಟೆ ಸಮಯದಾನ, ದಿನಕ್ಕೆ 20ಪೈಸೆ ಅಥವಾ ತಿಂಗಳಿನ ಒಂದು ದಿನದ ಸಂಬಳ, ಒಂದು ಮುಷ್ಠಿ ಅಕ್ಕಿಯನ್ನು ಸಂಗ್ರಹಿಸುವ ‘ಧಮ್್ರಘಾಟ್’ಗಳ ಮೂಲಕ ಕೋಟ್ಯಾಂತರ ಜನರನ್ನು ಗಾಯತ್ರೀ ಪರಿವಾರದ ಕುಟುಂಬದಲ್ಲಿ ಒಂದುಗೂಡಿಸಿದರು. ಹೀಗೆ ಹೊರಹೊಮ್ಮಿದ ಗಾಯತ್ರೀ ಪರಿವಾರದ ಆಧಾರವಾಗಿದ್ದು ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಯಜಿÕೀಯ ಭಾವನೆಗಳ ಸಮ್ಮಿಲನ.

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಗತ್ಸಿಂಗ್ರ ಗಲ್ಲು ಶಿಕ್ಷೆಯ ವಿರೋಧವಾಗಿ ಜನರಲ್ಲಿ ಉಂಟಾದ ಆಕ್ರೋಷ ಕೆಲವೊಮ್ಮೆ ಉಗ್ರ ಪರಿಸ್ಥಿತಿಗಳು ಉಂಟಾದಾಗ ಶ್ರೀ ಅರವಿಂದರ ಕ್ರಾಂತಿಕಾರಿ ಕಾಯ್ರಗಳಂತೆ ಶ್ರೀರಾಮರೂ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದರು. ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಅವರು ಬ್ರಿಟಿಷರ ಹೊಡೆತಗಳಿಗೆ ಎಚ್ಚರ ತಪ್ಪಿ ಬಿದ್ದರೇ ಹೊರತು ಓಡಿಹೋಗಲಿಲ್ಲ. ಅನಂತರ ಜನರು ಅವರನ್ನು ಮನೆಗೆ ಹೊತ್ತು ತರಬೇಕಾಯಿತು. ಜರಾರಾ ಆಂದೋಲನದಲ್ಲಿ ಬ್ರಿಟಿಷರ ಲಾಠಿಯ ಹೊಡೆತಗಳ ನಡುವೆಯೂ ಭಾರತ ಧ್ವಜವನ್ನು ಕೈ ಬಿಡಲಿಲ್ಲ. ಕೊನೆಗೆ ಬಾಯಿಯಲ್ಲಿ ಧ್ವಜವನ್ನು ಹಿಡಿದು ಹೋರಾಡಿದರು. ಅನಂತರ ವೈದ್ಯರು ಅವರ ಬಾಯಿಯಿಂದ ಹಲ್ಲುಗಳ ನಡುವೆ ಹಿಡಿದ ಧ್ವಜವನ್ನು ನೋಡಿ ಆಶ್ಚಯ್ರಚಕಿತರಾದರು. ಹೀಗೆ ಸ್ವಾತಂತ್ರ್ಯದ ಗುಂಗಿನಲ್ಲಿ ಮುಳುಗಿದ ಶ್ರೀರಾಮರು ‘ಶ್ರೀರಾಮ್ ಮತ್್ತ’ ಎಂದು ಪ್ರಸಿದ್ಧರಾದರು. ???ರ ಸಮಯದಲ್ಲಿ ಅವರು ಸಂಪೂಣ್ರ ಆಗ್ರಾ ಜಿಲ್ಲೆಯಲ್ಲಿ ತಿರುಗಿ ಕಂದಾಯದ ಅಂಕಿ ಅಂಶಗಳನ್ನು ಸಂಗ್ರಹಿಸಿ ಅಂದಿನ ಸಂಯುಕ್ತ ಪ್ರಾಂತದ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ್ ವಲ್ಲಭ್ ಪಂತರ ಮುಖಾಂತರ ಗಾಂಧೀಜಿಯವರಿಗೆ ಕಳುಹಿಸಿಕೊಟ್ಟರು. ಗಾಂಧೀಜಿಯವರು ಬಹಳ ಜಾಗರೂಕತೆಯಿಂದ ಸಂಗ್ರಹಿಸಿದ ಆ ಅಂಕಿ ಅಂಶಗಳನ್ನು ಮೆಚ್ಚಿಕೊಂಡು ಅವನ್ನು ಬ್ರಿಟಿಷ್ ಸಂಸತ್ತಿಗೆ ಕಳುಹಿಸಿಕೊಟ್ಟರು. ಈ ಅಂಕಿ ಅಂಶಗಳ ಆಧಾರದ ಮೇಲೆ ಸಂಪೂಣ್ರ ಸಂಯುಕ್ತ ಸಂಸ್ಥಾನ ಪ್ರಾಂತದ ಕಂದಾಯವನ್ನು ರದ್ದುಗೊಳಿಸಲಾಯಿತು. ಯಾರು ತಮ್ಮ ಹೋರಾಟದ ಫಲವಾಗಿ ತಮಗಾಗಿ ಏನನ್ನೂ ಬೇಡಲಿಲ್ಲವೋ, ಅವರಿಗೆ ಭಾರತ ಸಕ್ರಾರವು 50 ವಷ್ರಗಳ ನಂತರ ತಾಮ್ರಪತ್ರ ಹಾಗೂ ಪಿಂಛಣಿಯನ್ನು ನೀಡಬಯಸಿತು. ಅದೇ ಸ್ವಾಭಿಮಾನದಿಂದ ಅವರು ಆ ಪಿಂಛಣಿ ಹಾಗೂ ಸವಲತ್ತುಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹಾಗೂ ಹರಿಜನ ನಿಧಿಗೆ ಸಮಪ್ರಿಸಿದರು. ಈ ಸಂತರ ವೈರಾಗ್ಯದ ಜೀವನಕ್ಕೆ ಇದಕ್ಕಿಂತಲೂ ಹೆಚ್ಚಿನ ನಿದಶ್ರನ ಇನ್ನೇನು ಬೇಕು?

1935ರ ನಂತರ ಅವರ ಜೀವನವು ಹೊಸ ತಿರುವನ್ನು ಪಡೆಯಿತು. ಅವರು ತಮ್ಮ ಗುರುಗಳ ಪ್ರೇರಣೆಯಂತೆ ಪಾಂಡೀಚೇರಿಯಲ್ಲಿ ಶ್ರೀ ಅರವಿಂದರನ್ನು, ಶಾಂತಿನಿಕೇತನದಲ್ಲಿ ರವೀಂದ್ರನಾಥ್ ಟಾಗೋರರನ್ನು ಹಾಗೂ ಸಾಬರ್ಮತಿ ಆಶ್ರಮದಲ್ಲಿ ಗಾಂಧೀಜಿಯವರನ್ನು ಭೇಟಿಯಾದರು. ಸಾಂಸ್ಕೃತಿಕ ಆಧ್ಯಾತ್ಮಿಕದ ಮಾಗ್ರದಲ್ಲಿ ಹೇಗೆ ರಾಷ್ಟ್ರವನ್ನು ಪರತಂತ್ರದಿಂದ ಮುಕ್ತಗೊಳಿಸಬಹದೆಂಬ ನಿದ್ರೇಶನವನ್ನು ಪಡೆದು ಅವರು ತಮ್ಮ ಅನುಷ್ಠಾನವನ್ನು ನಡೆಸುತ್ತ ಪತ್ರಿಕಾ ರಂಗವನ್ನು ಪ್ರವೇಶಿಸಿದರು. ಆ ಸಮಯದಲ್ಲಿ ಆಗ್ರಾದಿಂದ ಹೊರಬರುತ್ತಿದ್ದ ‘ಸೈನಿಕ್’ಪತ್ರಿಕೆಯ ಶ್ರೀ ಕೃಷ್ಣದತ್ತ ಪಾಲೀವಾಲರು ಶ್ರೀರಾಮರನ್ನು ಕಾಯ್ರವಾಹಕ ಸಂಪಾದಕರನ್ನಾಗಿ ಸೇರಿಸಿಕೊಂಡರು. ಬಾಬೂ ಗುಲಾಬ್ ರಾಯ್ ಹಾಗೂ ಪಾಲೀವಾಲರಿಂದ ಕಲಿಯುತ್ತ, ತಮ್ಮ ಸ್ವಾಧ್ಯಾಯದಲ್ಲಿಯೂ ನಿರತರಾಗಿ ಅವರು 1939ರ ವಸಂತ ಪಂಚಮಿಯಂದು ‘ಅಖಂಡ ಜ್ಯೋತಿ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಅದು ವೊದಲನೆಯ ಪ್ರಯತ್ನವಾಗಿತ್ತು. ಮತ್ತೆ ಜನವರಿ 1940ನಲ್ಲಿ ಪೂಣ್ರ ತಯಾರಿಯೊಂದಿಗೆ ವಿಧಿವತ್ತಾಗಿ ತಾವೇ ತಯಾರಿಸಿದ ಕಾಗದದ ಮೇಲೆ, ಕಾಲಿನಿಂದ ನಡೆಸಲ್ಪಟ್ಟ ಮುದ್ರಣ ಯಂತ್ರದೊಂದಿಗೆ ಅಖಂಡ ಜ್ಯೋತಿಯನ್ನು ಪ್ರಾರಂಭಿಸಿದರು. ವೊದಲ ಸಂಚಿಕೆಯನ್ನು 250 ಪ್ರತಿಗಳೊಂದಿಗೆ ಪ್ರಾರಂಭಿಸಿದರು. ಕ್ರಮಶ: ಅವರ ಹೃದಯಸ್ಪಶ್ರಿ ಲೇಖನಗಳು ಮನೆಯಿಂದ ಮನೆಗೆ, ವ್ಯಕ್ತಿಯಿಂದ ವ್ಯಕ್ತಿಗೆ ಹರಡಿ, ನವಯುಗದ ಮತ್ಸ್ಯಾವತಾರದಂತೆ ಬೆಳೆದು ಇಂದು ಅಖಂಡ ಜ್ಯೋತಿಯು ಅನೇಕ ಭಾಷೆಗಳಲ್ಲಿ, ಪ್ರತಿ ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಪತ್ರಿಕೆಯ ಜೊತೆ ಜೊತೆಗೆ “ನಾನು ಯಾರು” ವೊದಲಾದ ಪುಸ್ತಕಗಳ ಬರವಣಿಗೆ ಪ್ರಾರಂಭವಾಯಿತು. ವಾಸ್ತವ್ಯವು ಬದಲಾಗುತ್ತಾ ಆಗ್ರಾದಿಂದ ಮಥುರಾ ಬಂದು 2-3 ಮನೆಗಳಾದ ಮೇಲೆ ಘಿಯಾ ಮಂಡಿಯಲ್ಲಿ ಇಂದಿರುವ ಅಖಂಡ ಜ್ಯೋತಿ ಸಂಸ್ಥಾನಕ್ಕೆ ಬಂದರು. ಈ ಸಮಯದಲ್ಲಿ, ಪುಸ್ತಕಗಳ ಬರವಣಿಗೆ, ಕಠೋರ ತಪಸ್ಸು, ಮಮತ್ವದ ವಿಸ್ತಾರ ಹಾಗೂ ಪತ್ರಗಳಿಂದ ಜನರ ಮನಸನ್ನು ತಲುಪುವ ಕಾಯ್ರ ನಿರಂತರವಾಗಿ ನಡೆದಿತ್ತು. ಈ ಸಮಯದಲ್ಲಿ ಅವರ ಜೊತೆ ನೀಡಲು ಮಾತಾ ಭಗವತೀ ದೇವಿ ಶಮ್ರರು ಬಂದು ಸೇರಿದರು. ಮಾತಾಜೀಯವರು ಮುಂದಿನ ದಿನಗಳಲ್ಲಿ ತಮ್ಮ ಆರಾಧ್ಯ ದೈವನಿಗಾಗಿ ಮಹತ್ವಪೂಣ್ರ ಆಧ್ಯಾತ್ಮಿಕ ಭೂಮಿಕೆಯನ್ನು ತಳೆದರು. ಅವರ ಮನಸ್ಪಶ್ರಿಸುವ ಪತ್ರಗಳು, ಭಾವಪೂಣ್ರ ಆತಿಥ್ಯ, ಪ್ರತಿಯೊಬ್ಬ ಪೀಡಿತನಿಗೂ ನೀಡಿದ ಮಮತ್ವ ಭರಿತ ಸಲಹೆಗಳು ಇಂದಿನ ಗಾಯತ್ರೀ ಪರಿವಾರದ ಆಧಾರಶಿಲೆಗಳಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ವಿಚಾರಕ್ರಾಂತಿಯಲ್ಲಿ ಅವರ ಸಾಹಿತ್ಯವು ಮನಸನ್ನು ಪ್ರಚೋದಿಸಿದರೆ, ಅವರಿಬ್ಬರು ಹರಿಸಿದ ಅಪ್ರತಿಮ ಸ್ನೇಹ ಹಾಗೂ ಬ್ರಾಹ್ಮಣೋಚಿತ ಜೀವನವು ಜನರ ಭಾವನೆಗಳನ್ನು ತುಂಬಿದವು.

ಅಖಂಡಜ್ಯೋತಿ ಪತ್ರಿಕೆಯು ಜನರ ಮನಸನ್ನು ಪ್ರಭಾವಿತಗೊಳಿಸುತಿತ್ತು. ಅದರಲ್ಲಿನ ‘ಗಾಯತ್ರೀ ಚಚ್ರೆ’ ಎಂಬ ಸ್ತಂಭದಿಂದ ಗಾಯತ್ರಿಯ ಬಗೆಗಿನ ಅನೇಕಾನೇಕ ಸಂಶಯಗಳು ಜನರ ಮನಸ್ಸಿನಿಂದ ದೂರವಾದುವು. ಇದರ ಜೊತೆಯಲ್ಲಿ 1 ರಿಂದ 6 ಆಣೆಗಳ ಪುಸ್ತಕಗಳು ಮುದ್ರಣಗೊಂಡವು. ಇದರ ನಡುವೆ ಹಿಮಾಲಯಕ್ಕೆ ಆಹ್ವಾನ ಬಂದಿತು, ಅನುಷ್ಠಾನ ನಿರಂತರವಾಗಿ ನಡೆದಿತ್ತು. ಈ ಅನುಷ್ಠಾನವು 1953ಯಲ್ಲಿ ಗಾಯತ್ರಿ ತಪೋಭೂಮಿಯ ಸ್ಥಾಪನೆ, 108 ಕುಂಡೀಯ ಯಜÕ ಹಾಗೂ ಅದರ ಮೂಲಕ ನೀಡಲಾದ ವೊದಲ ದೀಕ್ಷೆಯಿಂದ ಸಮಾಪ್ತವಾಯಿತು. ಗಾಯತ್ರೀ ತಪೋಭೂಮಿಯ ಸ್ಥಾಪನೆಗೆ ಹಣದ ಅವಶ್ಯಕತೆ ಎದುರಾದಾಗ, ಮಾತಾಜೀಯವರು ತಮ್ಮೆಲ್ಲ ಒಡವೆಗಳನ್ನು ಮಾರಿದರು, ಪೂಜ್ಯ ಗುರುದೇವರು ತಮ್ಮ ಜಮೀನ್ದಾರಿಯ ಬಾಂಡ್ಗಳನ್ನು ಮಾರಿ, ಭೂಮಿಯನ್ನು ಕೊಂಡು ತಾತ್ಕಾಲಿಕ ಸ್ಥಾಪನೆಯನ್ನು ಮಾಡಿದರು. ಕ್ರಮಶಃ ಉದಾರಿಗಳ ಮೂಲಕ ತಪೋಭೂಮಿಯು ಒಂದು ಸಾಧನಾ ಪೀಠವಾಗಿ ಬೆಳೆಯಿತು. ಅಲ್ಲಿ 2400 ತೀಥ್ರಕ್ಷೇತ್ರಗಳಿಂದ ತಂದ ಮಣ್ಣು ಹಾಗೂ ನೀರನ್ನು ಸ್ಥಾಪಿಸಲಾಯಿತು, 2400 ಕೋಟಿ ಗಾಯತ್ರೀ ಮಂತ್ರ ಲೇಖನಗಳು ಸ್ಥಾಪಿತವಾದುವು, ಹಿಮಾಲಯದ ಪವಿತ್ರ ಕ್ಷೇತ್ರದಿಂದ ತಂದ ಅಖಂಡ ಅಗ್ನಿಯು ಅಲ್ಲಿನ ಯಜ್ಜಶಾಲೆಯಲ್ಲಿ ಸ್ಥಾಪಿತವಾಯಿತು. ಈ ಅಗ್ನಿಯು ಇಂದಿಗೂ ಅಲ್ಲಿ ಉರಿಯುತ್ತಿದೆ. 1941ಇಂದ 1971 ವರೆಗಿನ ಸಮಯವು ಗುರುದೇವರು ಗಾಯತ್ರೀ ತಪೋಭೂಮಿ, ಅಖಂಡ ಜ್ಯೋತಿಸಂಸ್ಥಾನದಲ್ಲಿ ವಾಸಿಸಿದರು. 1956ರಲ್ಲಿ ನರಮೇಧ ಯಜÕ, 1958ರಲ್ಲಿ ಸಹಸ್ರ ಕುಂಡೀಯ ಯಜÕಗಳ ಮೂಲಕ ಲಕ್ಷಾಂತರ ಗಾಯತ್ರೀ ಸಾಧಕರನ್ನು ಒಂದೆಡೆ ಸೇರಿಸಿ ಗಾಯತ್ರೀ ಪರಿವಾರದ ಬೀಜಗಳನ್ನು ನೆಡಲಾಯಿತು. 1958ರ ಕಾತ್ರೀಕ ಹುಣ್ಣಿಮೆಯಂದು ನಡೆದ ಈ ಕಾಯ್ರಕ್ರಮದಲ್ಲಿ 10 ಲಕ್ಷ ಜನರು ಭಾಗವಹಿಸಿದರು ಹಾಗೂ ಪ್ರಗತಿಶೀಲ ಗಾಯತ್ರಿ ಪರಿವಾರದ 10 ಸಾವಿರಕ್ಕೂ ಹೆಚ್ಚು ಶಾಖೆಗಳು ಪ್ರಾರಂಭವಾದವು. ಸಂಘಟನೆಯ ಕಾಯ್ರಭಾರವನ್ನು ಕ್ರಮಶಃ ಮಾತಾಜೀಯವರ ಮೇಲೆ ಹೊರಿಸಿತ್ತಾ 1959ರಲ್ಲಿ ಪತ್ರಿಕೆಯ ಸಂಪಾದಕತ್ವವನ್ನೂ ಅವರಿಗೆ ಒಪ್ಪಿಸಿದರು. ನಂತರ 27ತಿಂಗಳು ಹಿಮಾಲಯದಲ್ಲಿ ತಮ್ಮ ಗುರುಗಳ ಮಾಗ್ರದಶ್ರನವನ್ನು ಪಡೆಯುತ್ತಾ, ನಂದನವನದಲ್ಲಿ ಋಷಿಗಳ ಸಾಕ್ಷಾತ್ಕಾರವನ್ನು ಹೊಂದಿ, ಗಂಗೋತ್ರಿಯ ದಡದಲ್ಲಿ ಆಷ್ರಗ್ರಂಥಗಳ ಮೇಲೆ ಭಾಷ್ಯವನ್ನು ಬರೆದರು. ಇಷ್ಟರಲ್ಲಿ ಗಾಯತ್ರಿಯ ಎಲ್ಲ ಆಯಾಮಗಳನ್ನು ವಿವರಿಸುವ 3 ಭಾಗಗಳ ವಿಶ್ವಕೋಶದಂತಹ “ಗಾಯತ್ರಿ ಮಹಾ ವಿಜಾÕನ್”ಗ್ರಂಥವನ್ನು ರಚಿಸಿದರು. ಈ ಗ್ರಂಥವು ಇದುವರೆಗೂ 35ಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ. ಹಿಮಾಲಯದಿಂದ ಬಂದ ನಂತರ ಮಹತ್ವಪೂಣ್ರ ನಿಧಿಗಳಾದ ವೇದಗಳು, ಉಪನಿಷತ್ತುಗಳು, ಸ್ಮೃತಿಗಳು,ಆರಣ್ಯಕಗಳು, ಬ್ರಾಹ್ಮಣಗಳು, ಯೋಗವಾಸಿಷ್ಠ, ಮಂತ್ರ ಮಹಾ ವಿಜಾÕನ, ತಂತ್ರ ಮಹಾ ವಿಜಾÕನ ವೊದಲಾದ ಗ್ರಂಥಗಳನ್ನು ಮುದ್ರಿಸಿ ದೇವ ಸಂಸ್ಕೃತಿಯ ಮೂಲ ಭರವಸೆಗೆ ಪ್ರಾಣನೀಡಿದರು. ಪರಮ ವಂದನೀಯ ಮಾತಾಜೀಯವರು 1991-1992ರಲ್ಲಿ ಈ ಗ್ರಂಥಗಳಿಗೆ ವೈಜಾÕನಿಕ ಆಧಾರಗಳನ್ನು ನೀಡಿ ಮತ್ತೆ ಮುದ್ರಿಸಿದರು. ಇಂದು ಇವು ಮನೆ ಮನೆಗಳಲ್ಲಿ ಸ್ಥಾಪಿತವಾಗಿವೆ.

ಪರಿವಾರದ ಗುರಿಯ ಘೋಷಣಾ ಪತ್ರವು ಯುಗ ನಿಮ್ರಾಣ ಯೋಜನೆ ಹಾಗೂ ಯುಗನಿಮ್ರಾಣ ಸತ್ಸಂಕಲ್ಪದ ಮೂಲಕ 1963ರಲ್ಲಿ ಪ್ರಕಾಶಿತವಾಯಿತು, ಗಾಯತ್ರೀ ಪರಿವಾರದ ಬೀಜಾರೋಪಣೆಯಾದ ಅಖಂಡ ಜ್ಯೋತಿ ಸಂಸ್ಥಾನದಲ್ಲಿ ಅವರು ತಮ್ಮ ತಪಸ್ಸನ್ನು ಪೂತ್ರಿಗೊಳಿಸಿದರು. ನೋಡುತ್ತಾ ನೋಡುತ್ತಾ ತಪೋಭೂಮಿಯು ವಿಶ್ವವಿದ್ಯಾಲಯದಂತೆ ಬೆಳೆಯತೊಡಗಿತು. ಪೂಜ್ಯರು ಅನೇಕ ಸಣ್ಣ-ದೊಡ್ಡ ಜನ ಸಮ್ಮೇಳನಗಳ, ಯಜÕಗಳ ಮೂಲಕ ವಿಚಾರಕ್ರಾಂತಿಯ ಹಿನ್ನೆಲೆಯನ್ನು ತಯಾರಿಸುತ್ತಿದ್ದರು. ತಪೋಭೂಮಿಯಲ್ಲಿ ಅನೇಕ ಶಿಬಿರಗಳು ಏಪ್ರಾಟಾದವು. 1970-71ರಲ್ಲಿ ದೇಶದಲ್ಲೆಡೆ ಐದು 1008 ಕುಂಡೀಯ ಯಜÕಗಳು ನಡೆದವು. ಜೂನ್ 1971ರಲ್ಲಿ ಒಂದು ವಿರಾಟ್ ಸಮ್ಮೇಳನವನ್ನು ನಡೆಸಿ, ತಮ್ಮ ಪರಿಜನರಿಗೆ ಕಾಯ್ರಭಾರವನ್ನು ವಹಿಸಿಕೊಟ್ಟು, ಮಾತಾಜೀಯವರನ್ನು ಶಾಂತಿಕುಂಜದ ಅಖಂಡ ದೀಪದ ಸಮಕ್ಷಮದಲ್ಲಿ ತಪಸ್ಸಿಗೆ ಬಿಟ್ಟು, ಒಂದು ವಷ್ರದ ಕಾಲ ತಮ್ಮ ಸಂಗಡಿಗರಿಂದ ದೂರವಾಗಿ ಹಿಮಾಲಯದಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಿದರು. ಸಾಧನೆಯ ನಂತರ ತಮ್ಮ ಗುರುವಿನ ಸಂದೇಶವನ್ನು ತಂದು ಮುಂದಿನ ಇಪ್ಪತ್ತು ವಷ್ರಗಳ ತಮ್ಮ ಪ್ರಣಾಳಿಕೆಯನ್ನು ತಯಾರಿಸಿಟ್ಟರು. ಋಷಿ ಪರಂಪರೆಯ ಬೀಜಾರೋಪಣೆ, ಪ್ರಾಣ ಪ್ರತ್ಯಾವತ್ರನೆ, ಸಂಜೀವಿನಿ ಹಾಗೂ ಕಲ್ಪ ಸಾಧನಾ ಶಿಬಿರಗಳ ಮಾಗ್ರದಶ್ರನ ವೊದಲಾದ ಕಾಯ್ರಗಳನ್ನು ಅವರು ಶಾಂತಿಕುಂಜದಲ್ಲಿ ನಡೆಸಿದರು.

ವಿಜಾÕನ ಹಾಗೂ ಆಧ್ಯಾತ್ಮಗಳ ಸಮನ್ವಯದ ಪ್ರತಿಪಾದನೆಗಳ ಮೇಲಿನ ಶೋಧನೆಗಾಗಿ ಹಾಗೂ ಒಂದು ಹೊಸ ವೈಜಾÕನಿಕ ಧಮ್ರದ ಮೂಲಭೂತ ಆಧಾರಕ್ಕಾಗಿ ಬ್ರಹ್ಮವಚ್ರಸ್ ಶೋಧ ಸಂಸ್ಥಾನದ ಸ್ಥಾಪನೆಯಾಯಿತು. ಇದು ಈ ಹಿಮಾಲಯ ಯಾತ್ರೆಯ ಅತ್ಯಂತ ಮಹತ್ವಪೂಣ್ರವಾದ ಸ್ಥಾಪನೆಯಾಗಿತ್ತು. ಇದರ ಸಂಬಂಧವಾಗಿ ಪೂಜ್ಯರು ವಿರಾಟ್ ಪ್ರಮಾಣದ ಸಾಹಿತ್ಯವನ್ನು ರಚಿಸಿದರು. ಇವು ಅದೃಶ್ಯ ಜಗತ್ತಿನ ಶೋಧನೆಯಿಂದ ಹಿಡಿದು ಮಾನವನಲ್ಲಿ ಪ್ರಸುಪ್ತ ಶಕ್ತಿಗಳನ್ನು ಜಾಗೃತಗೊಳಿಸುವುದರವರೆಗೆ, ಸಾಧನೆಯಿಂದ ಸಿದ್ಧಿ ಹಾಗೂ ದಶ್ರನ-ವಿಜಾÕನಗಳ ತಕ್ರ, ತಥ್ಯಗಳ ಆಧಾರಗಳನ್ನು ಪ್ರಕಟಿಸುವವರೆಗಿನ ಅನೇಕ ವಿಷಯಗಳು ಅವರ ಲೇಖನಿಯಿಂದ ಹೊರ ಹೊಮ್ಮಿದವು. ಇದಕ್ಕಾಗಿ ಒಂದು ಬೃಹತ್ ಗ್ರಂಥಾಲಯ ಹಾಗೂ ಪ್ರಯೋಗಶಾಲೆಯ ನಿಮ್ರಾಣವಾಯಿತು. ಯಜÕ ವಿಜಾÕನ ಹಾಗೂ ಮಂತ್ರ ಶಕ್ತಿಯ ಮೇಲಿನ ಪ್ರಯೋಗಗಳಿಗಾಗಿ ಒಂದು ಗಿಡ ಮೂಲಿಕೆಗಳ ವನವನ್ನೂ ಸ್ಥಾಪಿಸಲಾಯಿತು. ಇಲ್ಲಿ ನಡೆದ ಪ್ರಯೋಗಗಳು ಧ್ಯಾನ ಸಾಧನೆ, ಮಂತ್ರ ವಿದ್ಯೆ ಹಾಗೂ ಯಜೊÕೀಪತಿಗಳನ್ನು ವಿಜಾÕನಸಮ್ಮತ ವಿದ್ಯೆಗಳನ್ನಾಗಿ ಋಜುಪಡೆಸಿದವು. ಗಾಯತ್ರೀ ನಗರವು ಕ್ರಮಶಃ ಒಂದು ತೀಥ್ರವಾಗಿ, ಸಂಜೀವಿನಿ ವಿದ್ಯೆಯ ಪರಿಷತ್ತಾಗಿ ಬೆಳೆಯುತ್ತಾ, 9 ದಿನಗಳ ಸಾಧನಾ ಪ್ರಧಾನವಾದ ಸಂಜೀವಿನಿ ಶಿಬಿರ ಹಾಗೂ ಕಾಯ್ರಕತ್ರರ ನಿಮ್ರಾಣಕ್ಕಾಗಿ 1 ತಿಂಗಳಿನ ಯುಗಶಿಲ್ಪಿ ಶಿಬಿರಗಳು ನಿರಂತರವಾಗಿ ಪ್ರಾರಂಭವಾದವು.

ಕಾಯ್ರಕ್ಷೇತ್ರ ಬೆಳೆಯುತ್ತಾ ಹೋಯಿತು. ಅನೇಕ ಕ್ಷೇತ್ರಗಳಲ್ಲಿ ಶಕ್ತಿಪೀಠಗಳು ನಿಮ್ರಿತವಾದವು. ಅವುಗಳಿಗೆ ನಿಧ್ರಾರಿತ ಕಾಯ್ರಕಲಾಪಗಳಿದ್ದವು. ಅವುಗಳು ಆಸ್ತಿಕತೆಯನ್ನು ಬೆಳೆಸುವ ಹಾಗೂ ಜನಜಾಗೃತಿಯ ಕೇಂದ್ರಗಳಾಗಿ ಬೆಳೆದವು. ಈ ಕೇಂದ್ರಗಳು 1970ರಿಂದ ಆರಂಭವಾಗಿ ಪ್ರಜಾÕ ಸಂಸ್ಥಾನ, ಶಕ್ತಿಪೀಠ, ಪ್ರಜಾÕಮಂಡಲ, ಸ್ವಾಧ್ಯಾಯ ಮಂಡಲಗಳ ರೂಪದಲ್ಲಿ ದೇಶದ, ವಿಶ್ವದ ಎಲ್ಲೆಡೆ ಹಬ್ಬಿದವು. 86 ದೇಶಗಳಲ್ಲಿ ಗಾಯತ್ರೀ ಪರಿವಾರದ ಶಾಖೆಗಳು ಸ್ಥಾಪಿತವಾದವು, ಭಾರತದಲ್ಲಿ 4600ಕ್ಕೂ ಹೆಚ್ಚು ತಮ್ಮದೇ ಆದ ಭವನವನ್ನು ಹೊಂದಿದ ಶಾಖೆಗಳು ಸ್ಥಾಪಿಸಲ್ಪಟ್ಟು ವಾತಾವರಣವು ಗಾಯತ್ರೀಮಯವಾಗತೊಡಗಿತು.

ಪರಮ ಪೂಜ್ಯ ಗುರುದೇವರು 1985ರಲ್ಲಿ ಸೂಕ್ಷ್ಮೀಕರಣ ಸಾಧನೆಯನ್ನು ಪ್ರಾರಂಭಿಸಿ ಮುಂದಿನ 5 ವಷ್ರಗಳಲ್ಲಿ ತಮ್ಮೆಲ್ಲ ಕ್ರಿಯಾ ಕಲಾಪಗಳನ್ನು ಪೂರೈಸುವ ಘೋಷಣೆಯನ್ನು ಮಾಡಿದರು. ಈ ಮಧ್ಯೆಯಲ್ಲಿ ಕಠೋರ ತಪಃಸಾಧನೆಯಲ್ಲಿ ಲೀನರಾಗಿ ಜನರೊಂದಿಗೆ ಸಂಪಕ್ರ ಕಡಿಮೆ ಮಾಡುತ್ತಾ ಹಾಗೂ ಕೆಲಸಗಳ ಜವಾಬ್ದಾರಿಯನ್ನು ಕ್ರಮಶಃ ಮಾತಾಜೀಯವರಿಗೆ ವಹಿಸಿಕೊಟ್ಟರು. ರಾಷ್ಟ್ರೀಯ ಏಕತಾ ಸಮ್ಮೇಳನಗಳನ್ನು, ವಿರಾಟ್ ದೀಪ ಯಜÕಗಳನ್ನು ಜನರಿಗೆ ನೀಡಿ ದೇಶದ ಕುಂಡಲಿನಿಯನ್ನು ಜಾಗೃತಗೊಳಿಸಲು ತಮ್ಮ ಸ್ಥೂಲ ಶರೀರವನ್ನು ತೊರೆದು ಸೂಕ್ಷ್ಮದಲ್ಲಿ ಪ್ರವೇಶಿಸಿ ತಮ್ಮ ಕಾಯ್ರವ್ಯಾಪ್ತಿಯನ್ನು ವಿರಾಟ್ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಘೋಷಣೆಯೊಂದಿಗೆ 1990 ಜೂನ್ 2 ಗಾಯತ್ರೀ ಜಯಂತಿಯಂದು ಮಹಾಪ್ರಯಾಣಗೈದರು. ತಮ್ಮೆಲ್ಲ ಶಕ್ತಿಯನ್ನು ಮಾತಾಜಿಗೆ ಧಾರೆಯೆರೆದು ತಮ್ಮ ಹಾಗೂ ಮಾತಾಜಿಯ ನಂತರ ಸಂಘಶಕ್ತಿಗೆ ಪ್ರತೀಕವಾದ ದೀವಟಿಗೆಯನ್ನೇ ಆರಾಧ್ಯವನ್ನಾಗಿ ಪಾಲಿಸಲು ಆದೇಶಿದರು. ಬ್ರಹ್ಮಬೀಜದಿಂದ ವಿಕಸಿತಗೊಳ್ಳುವ ಬ್ರಹ್ಮಕಮಲದ ಸುವಾಸನೆಯನ್ನು ದೇವ ಸಂಸ್ಕೃತಿ ದಿಗ್ವಿಜಯ ಯಾತ್ರೆಯನ್ನಾಗಿ ಆರಂಭಿಸಲು ಮಾತಾಜಿಯವರನ್ನು ನಿದ್ರೇಶಿಸಿದರು.

ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಅಪ್ರಿಸುವ ಕಾಯ್ರಕ್ರಮವೊಂದನ್ನು ಹರಿದ್ವಾರದಲ್ಲಿ ಏಪ್ರಡಿಸಿದಾಗ ಲಕ್ಷಾಂತರ ಮಂದಿ ಜನರು ಸಮಾಜದ ನವ ನಿಮ್ರಾಣಕ್ಕಾಗಿ, ಮಾನವರಲ್ಲಿ ದೈವತ್ವದ ಉದಯಕ್ಕಾಗಿ, ಭೂಮಿಯ ಮೇಲೆ ಸ್ವಗ್ರಾವತರಣದ ಗುರುಸತ್ತೆಯ ಘೋಷಣೆಯನ್ನು ಸಾಕಾರಗೊಳಿಸಲು ತಮ್ಮ ಸಮಯವನ್ನು ನೀಡುವುದಾಗಿ ವಾಗ್ದಾನ ಮಾಡಿದರು. ಪರಮವಂದನೀಯ ಮಾತಾಜಿಯವರ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವವ್ಯಾಪಿಯನ್ನಾಗಿಸಲು, ಗಾಯತ್ರೀರೂಪಿ ಸಂಜೀವಿನಿಯನ್ನು ಮನೆ-ಮನೆಗೆ ಸೇರಿಸುವುದಕ್ಕಾಗಿ ಪ್ರಾರಂಭಿಸಿದ ಯುಗಸಂಧಿ ಮಹಾಪುರಶ್ಚರಣೆಯ ವೊದಲನೆಯ ಹಾಗೂ ಎರಡನೆಯ ಪೂಣ್ರಾಹುತಿಯ ಹೊತ್ತಿಗೆ ವಿರಾಟ್ ಅಶ್ವಮೇಧ ಯಜÕಗಳನ್ನು ಘೋಷಿಸಿದರು. ವಾತಾವರಣದ ಪರಿಷ್ಕಾರಕ್ಕಾಗಿ, ಸೂಕ್ಷ್ಮಜಗತ್ತಿನ ನವನಿಮ್ರಾಣ್ಕಾಗಿ ಹಾಗೂ ಸಾಂಸ್ಕೃತಿಕ, ವೈಚಾರಿಕ ಕ್ರಾಂತಿಗಾಗಿ ಸೌರ ಶಕ್ತಿಯನ್ನು ಉಪಯೋಗಿಸುವುದರ ಮೂಲಕ, ವಿಶಿಷ್ಟ ಪ್ರಯೋಗಗಳ ಮೂಲಕ, ವಿಶಿಷ್ಟ ಮಂತ್ರಾಹುತಿಗಳ ಮೂಲಕ ನಡೆಸಲ್ಪಟ್ಟ ಈ ಅಶ್ವಮೇಧ ಯಜÕಗಳು ಪ್ರಪಂಹವನ್ನು ಗಾಯತ್ರಿಮಯವನ್ನಾಗಿಸಿ ನವ ವಸಂತದ ಉಲ್ಲಾಸವನ್ನು ತುಂಬಿದವು. ತಮ್ಮ ಪೂವ್ರ ಆಶ್ವಾಸನೆಯಂತೆ ಪರಮವಂದನೀಯ ಮಾತಾಜಿಯವರು ನಾಲ್ಕು ವಷ್ರಗಳ ಕಾಲ ಪರಿಜನರಿಗೆ ಮಾಗ್ರದಶ್ರನವನ್ನು ನೀಡುತ್ತ, 16 ಯಜÕಗಳ ಸಂಚಾಲನೆಯನ್ನು ಮಾಡಿ 19 ಸೆಪ್ಟೆಂಬರ್ 1994ರ ಭಾದ್ರಪದ ಹುಣ್ಣಿಮೆಯ ಮಹಾಲಯ ಶ್ರಾದ್ಧಾರಂಭದ ಪುಣ್ಯವೇಳೆಯಲ್ಲಿ ತಮ್ಮ ಸ್ಥೂಲ ಶರೀರವನ್ನು ತ್ಯಜಿಸಿ ತಮ್ಮ ಆರಾಧ್ಯನಲ್ಲಿ ಸೇರಿದರು. ಅವರಿಬ್ಬರೂ ಸೂಕ್ಷ್ಮದಲ್ಲಿ ಸೇರಿದ ನಂತರ ಪರಿವಾರದ ಕಾಯ್ರಕ್ರಮಗಳು ವೇಗವಂತವಾಗಿ ಮುಂದುವರೆದವು. ಜೈಪುರ್ನಲ್ಲಿ ನವೆಂಬರ್ 1992ರಲ್ಲಿ ನಡೆದ ವೊದಲ ಅಶ್ವಮೇಧ ಯಜÕದಿಂದ ಹಿಡಿದು ಇಂದಿಗೂ ಅವರ ಸೂಕ್ಷ್ಮ ಸಂರಕ್ಷಣೆಯನ್ನು ನಾವು ಅನುಭವಿಸುತ್ತಿದ್ದೇವೆ.